ಗಾಯಕ: ಸೋನು ನಿಗಂ
ಸಾಹಿತ್ಯ: ಕವಿರಾಜ್
ಸಂಗೀತ : ಗುರುಕಿರಣ್

ಪ್ರೀತಿಯಲ್ಲೂ, ಯುದ್ಧದಲ್ಲೂ ಸರಿ-ತಪ್ಪು ಇಲ್ಲ ಎಲ್ಲೂ..
ಏನಾದರೂ ತಪ್ಪಾದರೂ, ಕ್ಷಮಯಾ-ಧರಿತ್ರಿ ನಾರಿ 
ನಾ ಹೇಳಬೇಕೆ ಸಾರಿ...? 

ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ 
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ 
ಬಾ ಇಲ್ಲಿ ಪ್ರೀತೀಲಿ ತೇಲೋ ||೨|| 

ಪ್ರೀತೀಲಿ ಎಲ್ಲರೂ, ಒಂಥರಾ ಮೂರ್ಖರು 
ಮಾತು ನೂರಿದ್ದರೂ, ಆಡದ ಮೂಕರು 
ಬರಿ ಕಣ್ಣಲ್ಲೇ ಬರೆದೂ ಓಲೆ 
ನೋಡು ನೋಡುತ್ತಲೆ ಎಲ್ಲ ಹೇಳೋ ಕಲೆ 
ಪ್ರೀತಿಗೆ ಕೊಟ್ಟೋರು ಯಾರೋ 

ಬಾನಿಂದ ಬಾ ಚಂದಿರ, ಈ ಭೂಮಿಯೇ ಸುಂದರಾ 

ಪ್ರೀತಿಯ ಅಂದವಾ, ಕಾಣದ ಅಂಧರು 
ಮೋಹದ ಪ್ರೀತಿಯಾ.. ಕುರುಡು ಅಂತಂದರು 
ಎರಡು ಕಣ್ಣು, ಕಡಿಮೆ ಏನು 
ಒಂದು ನೂರಾದರು ಕೊಡಲಾ ದೇವರು 
ಹೋಗೋಣ ತೇಲೋಣ ಬಾರೊ 

ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ 
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ 
ಬಾ ಇಲ್ಲಿ ಪ್ರೀತೀಲಿ ತೇಲೋ 